ಡೆ ಲ ರೂ, ವಾರನ್
	1815-1887. ಬ್ರಿಟಿಷ್ ಖಗೋಳವಿe್ಞÁನಿ; ಚಂದ್ರನ ಛಾಯಾಚಿತ್ರವನ್ನು ಪಡೆದ ಮೊದಲಿಗರಲ್ಲೊಬ್ಬ. ಭೌತವಿe್ಞÁನ, ರಸಾಯನವಿe್ಞÁನಗಳಲ್ಲಿಯೂ ಗಮನಾರ್ಹ ಸಂಶೋಧನೆಗಳನ್ನು ನಡೆಸಿದ. ಸ್ವಾರಸ್ಯಕರವಾದ ಕೆಲವು ಉಪಜ್ಞೆಗಳನ್ನೂ ಮಾಡಿದ ಬಹುಮುಖ ಪ್ರತಿಭಾವಂತ, ಈತ ಜನಿಸಿದ್ದು ಫ್ರಾನ್ಸಿನ ವಾಯುವ್ಯ ತೀರದ ಬಳಿ ಇರುವ ಚೌನೆಲ್ ದ್ವೀಪಗಳಲ್ಲೊಂದಾದ ಗರ್ನ್‍ಸೀ ದ್ವೀಪದಲ್ಲಿ (18-1-1815). ಪ್ಯಾರಿಸ್ ಮತ್ತು ಲಂಡನ್ ನಗರಗಳಲ್ಲಿ ತನ್ನ ಕಾಲೇಜ್ ವಿದ್ಯಾಭ್ಯಾಸವನ್ನು ಮುಗಿಸಿ ಅನಂತರ ಮುದ್ರಣವನ್ನು ವೃತ್ತಿಯಾಗಿ ಕೈಗೊಂಡ. ಲಕೋಟೆ ತಯಾರಿಸುವ ಒಂದು ಯಂತ್ರವನ್ನು 1851ರಲ್ಲಿ ಉಪಜ್ಞಿಸಿದ. ಇವನ ಆಸಕ್ತಿ ಕ್ರಮೇಣ ಖಗೋಳ ವಿe್ಞÁನದತ್ತ ತಿರುಗಿತು. 13" ಪ್ರತಿಫಲಕ ದೂರದರ್ಶಕವೊಂದನ್ನು ರಚಿಸಿ ಅದನ್ನು ಮಿಡ್ಲ್‍ಸೆಕ್ಸ್‍ನಲ್ಲಿರುವ ಕ್ರಾನ್‍ಫರ್ಡ್ ಎಂಬಲ್ಲಿ ಸ್ಥಾಪಿಸಿದ. ಅದರ ನೆರವಿನಿಂದ ಈತ ಪಡೆದ ಚಂದ್ರನ ಛಾಯಾಚಿತ್ರ ಇತಿಹಾಸದಲ್ಲೇ ಬಹುಶಃ ಎರಡನೆಯದು. ಇದಕ್ಕೆ ಕೆಲವು ವರ್ಷಗಳ ಮೊದಲು 1850ರಲ್ಲಿ ಅಮೆರಿಕನ್ ಖಗೋಳ ವಿe್ಞÁನಿ ವಿಲಿಯಮ್ ಕ್ರ್ಯಾಂಚ್ ಬಾಂಡ್ ಚಂದ್ರನ ಮೊತ್ತಮೊದಲ ಛಾಯಾಚಿತ್ರವನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದ. ಆದರೆ, ಡೆ ಲ ರೂ ಪಡೆದ ಛಾಯಾಚಿತ್ರ ಇನ್ನೂ ಸ್ಫುಟವಾದುದಾಗಿತ್ತು. ಜೊತೆಗೆ ಇಪ್ಪತ್ತು ಪಟ್ಟು ದೊಡ್ಡದಾಗಿತ್ತು. ಕಣ್ಣಿಗೆ ಕಾಣಿಸುವುದರ ಶಾಶ್ವತ ದಾಖಲೆ ಇಡುವುದಕ್ಕೆ ಮಾತ್ರವಲ್ಲದೆ ಛಾಯಾಚಿತ್ರಣ ವಿಧಾನದಿಂದ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಬಹುದು-ಸಾಮಾನ್ಯವಾಗಿ ಕಣ್ಣಿಗೆ ಕಾಣಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ಅದರ ಸಹಾಯದಿಂದ ನೋಡಬಹುದು ಎಂಬುದು ಡೆ ಲ ರೂ ವಿನ ದೂರದರ್ಶಕದಿಂದ ಸಿದ್ಧವಾಯಿತು.

	1858ರಲ್ಲಿ ಈತ ಸೂರ್ಯನ ಛಾಯಾಚಿತ್ರವನ್ನು ಪಡೆಯಬಲ್ಲ ಹೀಲಿಯೊಗ್ರಾಫ್ ಎಂಬ ಉಪಕರಣವನ್ನು ಉಪಜ್ಞಿಸಿದ. ಅಂದಿನಿಂದ ಪ್ರತಿದಿನವೂ ಸೂರ್ಯನ ಛಾಯಾಚಿತ್ರವನ್ನು ತೆಗೆಯುವುದು ರೂಢಿಗೆ ಬಂತು. ಸ್ಪೇನ್‍ನಲ್ಲಿ ಒಂದು ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿತು (1860). ಆ ವೇಳೆಯಲ್ಲಿ ಡೆ ಲ ರೂ ತನ್ನ ಹೀಲಿಯೊಗ್ರಾಫಿನ ನೆರವಿನಿಂದ ಕೆಲವು ಚಿತ್ರಗಳನ್ನು ಪಡೆದ. ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಚಂದ್ರನ ಅಂಚಿನ ಬಳಿ ಕಂಡುಬರುವ ಕೆಂಪು ಜ್ವಾಲೆಗಳು ನಿಜಕ್ಕೂ ಸೂರ್ಯನ ಮೇಲೆ ಏಳುವ ಜ್ವಾಲೆಗಳು, ಚಂದ್ರನ ಮೇಲಿನವಲ್ಲ ಎಂಬುದನ್ನು ಆ ಚಿತ್ರಗಳು ಸಿದ್ಧಪಡಿಸಿದುವು. ಇಂದು ಖಭೌತವಿe್ಞÁನವೆಂದು ಪ್ರಸಿದ್ಧವಾಗಿರುವ ವಿe್ಞÁನಶಾಖೆ ಪ್ರಾರಂಭವಾದುದು ಈ ಅಧ್ಯಯನಗಳಿಂದಲೇ ಎಂದು ಹೇಳಬಹುದು. 

	ಡೆ ಲ ರೂ ಖಗೋಳವಿe್ಞÁನದಲ್ಲಿ ಮಾತ್ರವಲ್ಲದೆ ಭೌತ ಮತ್ತು ರಸಾಯನ ವಿe್ಞÁನಗಳಲ್ಲಿಯೂ ಸಂಶೋಧನೆಗಳನ್ನು ನಡೆಸಿದ್ದುಂಟು. ಅನಿಲಗಳ ಮೂಲಕ ಆಗುವ ವಿದ್ಯುದ್ವಿಸರ್ಜನೆಯನ್ನು ಅಧ್ಯಯನ ಮಾಡಿದ. ಎಚ್.ಮುಲ್ಲರ್‍ನ ನೆರವಿನಿಂದ ಬೆಳ್ಳಿಯ ಕ್ಲೋರೈಡ್ ಬ್ಯಾಟರಿಯನ್ನು ಉಪಜ್ಞಿಸಿದ. ಗ್ಲಿಸರಿಕ್ ಆಮ್ಲವನ್ನು ಕುರಿತು ವ್ಯಾಪಕ ಸಂಶೋಧನೆ ನಡೆಸಿದ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಈತ ಕೆಲಸಮಾಡಿದ. ಬ್ರಿಟಿಷ್ ಕೆಮಿಕಲ್ ಸೊಸೈಟಿಯ ಸ್ಥಾಪಕರಲ್ಲಿ ಒಬ್ಬನಾಗಿದ್ದ ಈತ ಕೆಲಕಾಲ ಆ ಸಂಸ್ಥೆಯ ಅಧ್ಯಕ್ಷನೂ ಆಗಿದ್ದ; ರಾಯಲ್ ಸೊಸೈಟಿಯ ಫೆಲೊ ಆಗಿ ಚುನಾಯಿತನಾಗಿದ್ದ.

	1889ರ ಏಪ್ರಿಲ್ 18ರಂದು ಈತ ಲಂಡನ್ನಿನಲ್ಲಿ ನಿಧನಹೊಂದಿದ.
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ